ಭಾರತದ ಮಾರುಕಟ್ಟೆ ಪ್ರವೇಶಿಸಿದ ಮೋಟೋ ಜಿ4 ಪ್ಲೆ

ಲೆನೋವೋ ಇಂಡಿಯಾ ಇಂದು ಮೋಟೋ ಜಿ4 ಪ್ಲೆ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಮಾಡಿದೆ.  ಇದರ ಮಾರುಕಟ್ಟೆ ಬೆಲೆ ರೂ.8,999 ಅಗಿದ್ದು, ಇಂದು ರಾತ್ರಿ 10 ಘಂಟೆಯಿಂದ amazon.in ನಲ್ಲಿ ಲಭ್ಯವಾಗಲಿದೆ. ಇದನ್ನು ಕೊಳ್ಳಬಯಸುವವರಿಗೆ, ಕಪ್ಪು ಅಥವಾ ಬಿಳಿ ಬಣ್ಣಗಳ ಆಯ್ಕೆ ಇದೆ.
ಚಿತ್ರ ಕೃಪೆ: ಮೋಟರೋಲಾ

ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಮೋಟೋ ಜಿ4 ಹಾಗೂ ಮೋಟೋ ಜಿ4 ಪ್ಲಸ್ ಗೆ  ಹೋಲಿಸಿದಲ್ಲಿ, ಮೋಟೋ ಜಿ4 ಪ್ಲೆ ಅಷ್ಟೇನೂ ಶಕ್ತಿಶಾಲಿಯಾಗಿಲ್ಲ.  ಆದರೆ ಇದರ ಬೆಲೆ ಕೂಡಾ ಅವಕ್ಕೆ ಹೋಲಿಸಿದಲ್ಲಿ ತುಂಬಾ ಕಡಿಮೆ.  ಮೋಟೋ ಜಿ೪ ನ ಬೆಲೆ ರೂ.12,499 ಆಗಿದ್ದು, ಮೋಟೋ ಜಿ4 ಪ್ಲಸ್ 2 ಜಿಬಿ ರ್ಯಾಮ್  ನ ಬೆಲೆ ರೂ.13,499 ಆಗಿದೆ.
ಮೋಟೋ ಜಿ4 ಪ್ಲೆ ನಲ್ಲಿ 1.2ಗಿಗಾ ಹರ್ಟ್ಸ್ ಸಾಮರ್ಥ್ಯದ 64 ಬಿಟ್ ಕ್ವಾಡ್ಕೋರ್ ಸ್ನಾಪ್ ಡ್ರ್ಯಾಗನ್ 410 ಪ್ರೋಸೆಸರ್ ನೊಂದಿಗೆ 2 ಜಿಬಿ ರ್ಯಾಮ್ ಮತ್ತು ಅಡ್ರಿನೋ 306 ಜಿಪಿಯು ಇದೆ. 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಈ ಸ್ಮಾರ್ಟ್ ಫೊನಿನಲ್ಲಿ ನಿಮಗೆ 128 ಜಿಬಿ ವರೆಗಿನ ಮೈಕ್ರೋ ಎಸ್ ಡಿ ಕಾರ್ಡ್ ಹಾಕುವ ಅವಕಾಶವಿದೆ.
ಮೋಟೋ ಜಿ4 ಪ್ಲೆ ಸ್ಮಾರ್ಟ್ ಫೋನ್  720x1280 ಪಿಕ್ಸೆಲ್ ರೆಸೊಲೂಶನ್‌ನ(ಫುಲ್ ಎಚ್ ಡಿ ಅಲ್ಲ) 5 ಇಂಚಿನ ಐಪಿಎಸ್ ಪರದೆ ಹೊಂದಿದೆ.  ಉಳಿದಂತೆ ಇದರಲ್ಲಿ ಆಂಡ್ರಾಯ್ಡ್ 6.0.1 ಅಳವಡಿಸಲಾಗಿದ್ದು, 4ಜಿ ವಿವೋ ಎಲ್ ಟಿ ಯಿ(VoLTE) ಸೌಲಭ್ಯವೂ ಇದರಲ್ಲಿದೆ. ಸಂವಹನ ಸೌಲಭ್ಯಗಳಾದ 4ಜಿ, 3ಜಿ, 2ಜಿ, ಬ್ಲೂಟೂತ್, ವೈಫೈ ಮತ್ತು ಮೈಕ್ರೋ ಯುಎಸ್ ಬಿ ಗಳು ಇದರಲ್ಲಿವೆ.  ಕಂಪೆನಿ ಹೇಳಿಕೆ ಪ್ರಕಾರ ಇದು ರಿಲಾಯನ್ಸ್ ಜಿಯೋ ಸೇವೆಯನ್ನು ಉಪಯೋಗಿಸುವ ಸಾಮರ್ಥ್ಯ ಹೊಂದಿದೆ.
ಮೋಟೋ ಜಿ4 ಪ್ಲೆ ನಲ್ಲಿ f/2.2 ಲೆನ್ಸ್ ನ 8 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮರವಿದ್ದು, ಮುಂಬದಿ 5 ಮೆಗಾಪಿಕ್ಸೆಲ್ ಸ್ವಂತೀ ಕ್ಯಾಮರವಿದೆ. 2800 ಎಮ್ ಎ ಎಚ್(mAh) ಬ್ಯಾಟರಿ ಇದರಲ್ಲಿದ್ದು, ವೇಗವಾಗಿ ಚಾರ್ಜ್ ಮಾಡುವ 10W ಸಾಮರ್ಥ್ಯದ ರ್ಯಾಪಿಡ್ ಚಾರ್ಜರ್ ಇದರೊಂದಿಗೆ ದೊರೆಯುತ್ತದೆ.

ಮೋಟೋ ಜಿ4 ಪ್ಲೆ ಗುಣವೈಶಿಷ್ಟ್ಯಗಳ ಕಿರುನೋಟ


  • 5 ಇಂಚು 720x1280 ಪಿಕ್ಸೆಲ್ ರೆಸಲ್ಯೂಶನಿನ ಐಪಿಎಸ್ ಪರದೆ.
  • ಆಂಡ್ರಾಯ್ಡ್ 6.0.1.
  • 1.2ಗಿಗಾ ಹರ್ಟ್ಸ್ ಸಾಮರ್ಥ್ಯದ 64 ಬಿಟ್ ಕ್ವಾಡ್ಕೋರ್ ಸ್ನಾಪ್ ಡ್ರ್ಯಾಗನ್ 410 ಪ್ರೋಸೆಸರ್ ಮತ್ತು ಅಡ್ರಿನೋ 306 ಜಿಪಿಯು.
  • 2 ಜಿಬಿ ರ್ಯಾಮ್ ಮತ್ತು 16ಜಿಬಿ ಆಂತರಿಕ ಸಂಗ್ರಹ( ಇದರಲ್ಲಿ ಗ್ರಾಹಕರಿಗೆ ಸುಮಾರು 7 ಜಿಬಿಯಷ್ಟು ಮಾತ್ರ ಸಂಗ್ರಹ ದೊರೆಯುತ್ತದೆ).
  • 4ಜಿ, 3ಜಿ, 2ಜಿ, ಬ್ಲೂಟೂತ್, ವೈಫೈ ಮತ್ತು ಮೈಕ್ರೋ ಯುಎಸ್ ಬಿ ಸಂವಹನ ಸೌಲಭ್ಯಗಳು. 
  • 2800 ಎಮ್ ಎ ಎಚ್(mAh) ಬ್ಯಾಟರಿಯೊಂದಿಗೆ 10W ಸಾಮರ್ಥ್ಯದ ರ್ಯಾಪಿಡ್ ಚಾರ್ಜರ್ .

Comments