ಬಿಎಸ್ಎನ್ಎಲ್ ನಿಂದ ರೂ.249ಕ್ಕೆ ಅನಿಯಮಿತ ಬ್ರಾಡ್ ಬ್ಯಾಂಡ್ ಸೇವೆ - ಹೊಸ ಗ್ರಾಹಕರಿಗಾಗಿ ಮಾತ್ರ!!

ಭಾರತ್ ಸಂಚಾರ್ ನಿಗಮವು ಹೊಸ ಗ್ರಾಹಕರನ್ನು ಸೆಳೆಯಲು  ಎಕ್ಸ್ ಪೀರಿಯನ್ಸ್  ಬ್ರಾಡ್ ಬ್ಯಾಂಡ್ 249(ಬಿಬಿ 249) ಎಂಬ ಹೊಚ್ಚ ಹೊಸ ಬ್ರಾಡ್ ಬ್ಯಾಂಡ್ ಯೋಜನೆಯೊಂದನ್ನು ಪ್ರಕಟಿಸಿದೆ.  ಈ ಯೋಜನೆಯನ್ವಯ ಗ್ರಾಹಕರು  ತಿಂಗಳಿಗೆ ಕೇವಲ ರೂ. 249 ಪಾವತಿಸುವ ಮೂಲಕ ಅನಿಯಮಿತ ಬ್ರಾಡ್ ಬ್ಯಾಂಡ್  ಸೇವೆಯನ್ನು ಪಡೆಯಬಹುದು. 
ಈ ಪರಿಚಯಾತ್ಮಕ ಯೋಜನೆಯು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು,  ಆಸಕ್ತ ಹೊಸಗ್ರಾಹಕರು ಇದೇ ಶುಕ್ರವಾರದಿಂದ(ಸೆಪ್ಟೆಂಬರ 9) ದಿಂದ ಈ ಯೊಜನೆಯನ್ನು ಆರಿಸಿಕೊಳ್ಳಬಹುದು. ಈ ಯೊಜನೆಯು ADSL ಮತ್ತು FTTH ಮೂಲಕ ಲಭ್ಯವಿದ್ದು, ಅನುಸ್ಥಾಪನ  ದರದಿಂದ ವಿನಾಯಿತಿ ಪಡೆಯುವ ಅವಕಾಶವೂ ಈ ಯೋಜನೆಯಲ್ಲಿದೆ.


ಈ ಯೋಜನೆ ಪ್ರಕಾರ,  ಗ್ರಾಹಕರು ತಿಂಗಳಿಗೆ ರೂ. 249 ಪಾವತಿಸಿದಲ್ಲಿ, ಒಂದು ಜಿಬಿ ಡಾಟಾವನ್ನು 2 ಎಂಬಿಪಿಸ್ ವೇಗದಲ್ಲೂ ಮತ್ತು ತದನಂತರ 1 ಎಂಬಿಪಿಸ್ ವೇಗದಲ್ಲಿ ಅನಿಯಮಿತವಾದ ಅಂತರ್ ಜಾಲ ಸೇವೆಯನ್ನು ಪಡೆಯಬಹುದು. ಇದಲ್ಲದೆ, ಬಿಬಿ249 ಯೊಜನೆಯು ರಾತ್ರಿ 9 ರಿಂದ ಬೆಳಗ್ಗೆ 5ರ ವರೆಗೆ ಮತ್ತು ಪ್ರತೀ ಭಾನುವರಗಳಂದು   ಭಾರತದಾದ್ಯಂತ ಯಾವುದೇ ದೂರವಣಿಗೆ  ಅನಿಯಮಿತ  ಉಚಿತ ಹೊರ ಹೋಗುವ ಕರೆ ಸೌಲಭ್ಯವನ್ನೂ ನೀಡುತ್ತದೆ. ಉಚಿತವಿಲ್ಲದ ಸಮಯದಲ್ಲಿ, ನೀವು ಹೊರ ಹೋಗುವ ಕರೆ ಮಾಡಿದಲ್ಲಿ, ಬಿಎಸ್ಎನ್ಎಲ್  ಚಂದಾದಾರರಿಗೆ  3 ನಿಮಿಷಕ್ಕೆ ರೂ. 1 ರಂತೆಯೂ ಮತ್ತು 3 ನಿಮಿಷಕ್ಕೆ  ರೂ.1.2 ರಂತೆ ಬೇರೆ ಗ್ರಾಹಕರಿಗೆ ಕರೆ ದರಗಳು ನಿಗದಿಯಾಗಿದೆ. 
ಈ ಯೋಜನೆಯು 6 ತಿಂಗಳುಗಳವರೆಗೆ ಮಾತ್ರ ಲಭ್ಯವಿದ್ದು ನಂತರ ಬಿಬಿಜಿ ಕೋಂಬೋ ಯುಎಲ್ ಡಿ 499 ಎಂಬ ಯೋಜನೆಗೆ ವರ್ಗಯಿಸಲ್ಪಡುತ್ತದೆ. ಅಂದರೆ ಈ ಯೊಜನೆಯನ್ನು ಪಡೆದ ಗ್ರಾಹಕರು, 6 ತಿಂಗಳ ನಂತರ ಈ ಎಲ್ಲಾ ಸೌಲಭ್ಯವುಳ್ಳ  ಅಂತರ್ಜಾಲ ಸೇವೆಯನ್ನು ಉಳಿಸಿಕೊಳ್ಳಲು  ತಿಂಗಳಿಗೆ ರೂ. 499 ರಂತೆ ಪಾವತಿಸಬೇಕಾಗುತ್ತದೆ. 

ಎಕ್ಸ್ ಪೀರಿಯನ್ಸ್  ಬ್ರಾಡ್ ಬ್ಯಾಂಡ್ 249(ಬಿಬಿ 249)  ಗುಣವೈಶಿಷ್ಯ್ಟಗಳು

  • ರೂ.249 ಮಾಸಿಕ ಬಾಡಿಗೆ.
  • ಯಾವುದೇ  ಅನುಸ್ಥಾಪನ ದರಗಳಿಲ್ಲ.
  • ರಾತ್ರಿ 9 ರಿಂದ ಬೆಳಗ್ಗೆ 5ರ ವರೆಗೆ ಮತ್ತು ಪ್ರತೀ ಭಾನುವರಗಳಂದು   ಭಾರತದಾದ್ಯಂತ ಯಾವುದೇ ದೂರವಣಿಗೆ  ಅನಿಯಮಿತ  ಉಚಿತ ಹೊರ ಹೋಗುವ ಕರೆಗಳು. 
  • ಒಂದು ಜಿಬಿ ಡಾಟಾವರೆಗೆ 2 ಎಂಬಿಪಿಸ್ ವೇಗ ತದನಂತರ 1 ಎಂಬಿಪಿಸ್ ವೇಗದಲ್ಲಿ ಅನಿಯಮಿತವಾದ ಅಂತರ್ ಜಾಲ ಸೇವೆ. 
  •  ಕರೆ ದರಗಳು:  ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್ ಗೆ 3ನಿಮಿಷಕ್ಕೆ ರೂ.1 ಮತ್ತು ಬಿಎಸ್ಎನ್ಎಲ್ ನಿಂದ ಬೇರೆ ನೆಟ್ ವರ್ಕ್ ಗೆ 3 ನಿಮಿಷಕ್ಕೆ  ರೂ.1.2.
  • ಯೋಜನೆಯ ಸಿಂಧುತ್ವ: 6 ತಿಂಗಳು. ನಂತರ ಬಿಬಿಜಿ ಕೋಂಬೋ ಯುಎಲ್ ಡಿ 499 ಯೋಜನೆಗೆ ವರ್ಗಾವಣೆ.

Comments