ಹಾನರ್ ಹೋಲಿ ೩ ಪರಿಚಯ ಪ್ರಶ್ನೋತ್ತರ ಸಲಹೆಗಳು

ಹೂವಾವೇಯ ಅಂಗಸಂಸ್ಥೆಯಾದ ಹಾನರ್ ಕಂಪೆನಿಯು ಇತ್ತೀಚಿಗೆ ಭಾರತದಲ್ಲಿ ಹಾನರ್ ೮, ಹಾನರ್  ೮ ಸ್ಮಾರ್ಟ್  ಮತ್ತು  ಹಾನರ್ ಹೋಲಿ ೩ ಎಂಬ ೩ ಹೊಸ  ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಮಾಡಿತು.  ಹಾನರ್  ೮ ಸಂಸ್ಥೆ ಯ  ಪ್ರಮುಖ  ಸ್ಮಾರ್ಟ್  ಫೋನ್ ಆಗಿದ್ದು, ಹಾನರ್  ಹೋಲಿ ೩ ಈ ಮೂರರಲ್ಲಿ  ಅತ್ಯಂತ  ಅಗ್ಗದ  ಸ್ಮಾರ್ಟ್ ಫೋನ್ ಆಗಿದೆ.  ಈ ಬರಹದಲ್ಲಿ  ನಾವು, ಹಾನರ್ ಹೋಲಿ ೩ ಬಗ್ಗೆ ಸಾಮಾನ್ಯವಾಗಿ  ಕೇಳಲ್ಪಡುವ  ಪ್ರಶ್ನೆಗಳು ಮತ್ತು ಕೆಲವೊಂದು ಸಲಹೆ ಟಿಪ್ಪಣಿಗಳ ಬಗ್ಗೆ ತಿಳಿದುಕೊಳ್ಳೋಣ.

ಹಾನರ್ ಹೋಲಿ ೩ ಪರಿಚಯಾತ್ಮಕ ಪ್ರಶ್ನೋತ್ತರಗಳು ಮತ್ತು ಸಲಹೆ ಟಿಪ್ಪಣಿಗಳು

ಭಾರತದಲ್ಲಿ ಹಾನರ್ ಹೋಲಿ ೩ರ ಬೆಲೆ ಏನು?  ಇದು ಎಲ್ಲಿ ದೊರೆಯುತ್ತದೆ ?

ಹಾನರ್ ಹೋಲಿ ೩ರ ಬೆಲೆ ರೂ.೯೯೯೯ ಆಗಿದ್ದು, ಸದ್ಯಕ್ಕೆ Flipkart.com ಮತ್ತು Amazon.in ನಲ್ಲಿ ಲಭ್ಯವಿದೆ.

ಹಾನರ್ ಹೋಲಿ  ೩ ಯಾವ ಬಣ್ಣಗಳಲ್ಲಿ  ದೊರೆಯುತ್ತದೆ ?

ಇದು ಕಪ್ಪು, ಬಿಳಿ  ಮತ್ತು ಚಿನ್ನದ ಬಣ್ಣಗಳಲ್ಲಿ ದೊರೆಯುತ್ತದೆ. 

ಇದರಲ್ಲಿ ಮೈಕ್ರೋ ಎಸ್ ಡಿ ಕಾರ್ಡ್  ಉಪಯೋಗಿಸಬಹುದಾ? ಇದಕ್ಕಾಗಿಯೇ ಮೀಸಲಾದ ಜಾಗವಿದೆಯಾ?

ಇದೆ. ಇದರಲ್ಲಿ ನೀವು ೨ ಸಿಮ್ ಕಾರ್ಡ್  ಮತ್ತು ಮೈಕ್ರೋ ಎಸ್ ಡಿ ಕಾರ್ಡ್  ಏಕಕಾಲದಲ್ಲಿ ಬಳಸಬಹುದು.

ಹಾನರ್  ಹೋಲಿ ೩ ರಲ್ಲಿ ಯಾವ ರೀತಿಯ ಸಿಮ್ ಕಾರ್ಡ್ ಬಳಸಬಹುದು?

ಇದರಲ್ಲಿ ಮೈಕ್ರೋ ಸಿಮ್ ಕಾರ್ಡ್ ಅನ್ನು ಬಳಸಬಹುದು. 


ಹಾನರ್  ಹೋಲಿ ೩ ಗುಣವೈಶಿಷ್ಟ್ಯಗಳೇನು?

  • ೧.೨ ಗಿಗಾ ಹಾರ್ಟ್ಸ್  ಸಾಮರ್ಥ್ಯದ  ಓಕ್ಟಾ  ಕೋರ್ ಕಿರಿನ್ ೬೨೦ ಪ್ರೊಸೆಸರ್  ಮತ್ತು ೨ ಜಿಬಿ  ರ್ಯಾಮ್ .
  • ೧೬ ಜಿಬಿ  ಆಂತರಿಕ ಸಂಗ್ರಹ ಸಾಮರ್ಥ್ಯ(ಇದರಲ್ಲಿ ಸುಮಾರು ೧೦ಜಿಬಿ ಯಷ್ಟು ಬಳಕೆಯೊಗ್ಯ).
  • ೧೨೮ ಜಿಬಿ ವರೆಗಿನ ಮೈಕ್ರೋ ಎಸ್  ಡಿ  ಕಾರ್ಡ್ ಹಾಕುವ ಸಾಮರ್ಥ್ಯ.
  • ೧೩ ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾ ಮತ್ತು ೮ ಮೆಗಾಪಿಕ್ಸೆಲ್ ಸ್ವಂತೀ ಕ್ಯಾಮರಾ.
  • ೩೧೦೦ ಎಂ ಎ ಎಚ್  ಬ್ಯಾಟರಿ.
  • ೫.೫ ಇಂಚಿನ ೭೨೦ಪಿ ಎಚ್  ಡಿ  ಪ್ರದರ್ಶನ ತೆರೆ.
  • ಬೆಳಕು ಸಂವೇದಕ, ಡಿಜಿಟಲ್ ದಿಕ್ಸೂಚಿ ಸಂವೇದಕ, ಸಾಮೀಪ್ಯ ಸಂವೇದಕ ಮತ್ತು ಅಕ್ಸೆಲೆರೊಮೀಟರ್.

ಹಾನರ್ ಹೋಲಿ ೩ ರ ಪರದೆಯನ್ನು ಸೆರೆಹಿಡಿಯುವುದು ಹೇಗೆ?

ಹಾನರ್ ಹೋಲಿ ೩ ರ ಪರದೆಯಲ್ಲಿ ಮೂಡಿದ್ದನ್ನು ಸಂಗ್ರಹಿಸಲು(Screenshot on Honor Holly ೩)  ಹಲವು ವಿಧಾನಗಳಿವೆ. ಇದರಲ್ಲಿ ಸುಲಭವಾದ ವಿಧಾನವೆಂದರೆ, screenshot ಗುಂಡಿ ವಿಧಾನ.  ಇದಕ್ಕೆ,

  • ನಿಮಗೆ ಬೇಕಾದ ಪರದೆಗೆ ಹೋಗಿ.
  • ಈಗ ಪರದೆಯ ಮೇಲ್ಭಾಗದಿಂದ ಕೆಳಕ್ಕೆ  ಉಜ್ಜಿ ಪರದೆಯ ಮೇಲೆ ಉಜ್ಜಿ .
  • ಸೂಚನೆಗಳ ಪ್ರದೇಶಕ್ಕೆ(Notification) ಹೋಗುವಿರಿ. ಈಗ Shortcut ಆಯ್ಕೆ ಮಾಡಿ.
  • ಈಗ ಪರದೆಯಲ್ಲಿ  screenshot ಗುಂಡಿ ಕಾಣಸಿಗುತ್ತದೆ. ಅದನ್ನ ಒತ್ತಿ.
  • ನೀವು ಯಾವ ಪರದೆಯಲ್ಲಿದ್ದೀರೋ ಆ ಪರದೆಯು ಸೆರೆಹಿಡಿಯಲಾಗುತ್ತದೆ.
  • ಸಂಗ್ರಹಿಸಿದ ಪರದೆಯ ಚಿತ್ರವನ್ನು, Gallery ಕಡತ ಕೋಶದಲ್ಲಿ ನೋಡಬಹುದು.

ಹಾನರ್  ಹೋಲಿ ೩ಯ ಅನಾನುಕೂಲತೆಗಳೇನು ?

ಇದು ಹಾನರ್ ಹೋಲಿ ೩ ರ ಸಂಪೂರ್ಣ ವಿಮರ್ಶೆ ಅಲ್ಲ . ಸವಿವರವಾದ ಸಾಧಕ ಭಾಧಕಗಳ  ಬಗ್ಗೆ  ಮುಂದಿನ ಸಂಚಿಕೆಯಲ್ಲಿ ಬರೆಯುತ್ತೇನೆ. ಇದರ  ಬೆಲೆಯ ಆಸುಪಾಸಿನಲ್ಲಿ  ದೊರಕುವ ಬೇರೆ ಸ್ಮಾರ್ಟ್ ಫೋನ್ ಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಮೊದಲ ನೋಟದಲ್ಲಿ ನನಗನಿಸಿದ ಅನಾನುಕೂಲತೆಳು ಈ ಕೆಳಗಿನಂತಿವೆ.
  • ಬೆರಳಚ್ಚು ಸಂವೇದಕವಿಲ್ಲ.
  • ಸೂಚನೆಗಳನ್ನು ತಿಳಿಸುವ ಎಲ್ ಇ ಡಿ ದೀಪವಿಲ್ಲ.
  • ಆಪ್ ಗಳನ್ನು  ಮೈಕ್ರೋ ಎಸ್  ಡಿ  ಕಾರ್ಡ್ ಗೆ ವರ್ಗಾಯಿಸುವ ಅವಕಾಶವಿಲ್ಲ .




Comments